ಡಿವೈನ್ ಡೆವಲಪರ್ಸ್ ಸಂಸ್ಥೆ ಲಾಂಛನದಲ್ಲಿ ಅನುರಾವ್ ಅವರು ನಿರ್ಮಿಸುತ್ತಿರುವ ‘ಜ್ವಲಂತಂ’ ಚಿತ್ರಕ್ಕೆ ಸಂಗೀತ ನಿರ್ದೇಶಕ ವಿಕ್ರಂ ಸುಬ್ರಮಣ್ಯಂ ಅವರ ಸಾರಥ್ಯದಲ್ಲಿ ವಿಕ್ರಂ ಅವರ ಸ್ಟುಡಿಯೋದಲ್ಲೇ ರೀರೆಕಾರ್ಡಿಂಗ್ ನಡೆಯುತ್ತಿದೆ. ಬೆಂಗಳೂರು, ಚನ್ನಪಟ್ಟಣ, ಕಾರ್ಕಳ, ಹೊನ್ನವಾರ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಅಂಬರೀಶ್(ಹೊಸ ಪರಿಚಯ) ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯಂ ಮತ್ತು ಫ಼ಿನ್ನಿ ಕುರಿಯನ್ ಅವರ ಸಂಗೀತ ನಿರ್ದೇಶನವಿದೆ. ಶ್ರೀನಿವಾಸ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ಪ್ರೇಂರಕ್ಷಿತ್ ನೃತ್ಯನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅರಸು ಅಂತಾರೆ ಬರೆದಿದ್ದಾರೆ. ಜ್ವಾಲ(ಹೊಸ ಪರಿಚಯ), ದೀಪಗೌಡ, ದೀಪ್ತಿ, ಅಚ್ಯುತಕುಮಾರ್, ಬೆನಕ ಪವನ್, ಗೌತಮ್, ಕೃಷ್ಣ ಅಡಿಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.